ಅಭಿಪ್ರಾಯ / ಸಲಹೆಗಳು

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಬಗ್ಗೆ

    ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 1966 ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು 2022ರಲ್ಲಿ ಮಂಡಲಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಎಂದು ಪುನರ್ ನಾಮಕರಣ ಮಾಡಲಾಗಿದೆ.

   

   ಮಂಡಲಿಯು ಸಂಯೋಜಿತ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳ 10ನೇ ತರಗತಿಯ ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ನೆಡೆಸುವುದರ ಜೊತೆಗೆ ಸಂಗೀತ, ಡಿ.ಇಎಲ್.ಇಡಿ, ವಾಣಿಜ್ಯದಂತಹ ಇತರೆ 12 ಪರೀಕ್ಷೆಗಳನ್ನು ನಿರ್ವಹಿಸುತ್ತಿದೆ. ಮಂಡಲಿಯ ಮುಖ್ಯ ಕಛೇರಿಯು ಬೆಂಗಳೂರಿನಲ್ಲಿದೆ.

 

   ಮಂಡಲಿಯ ವಿಭಾಗೀಯ ಬೆಂಗಳೂರು, ಬೆಳಗಾಂ, ಕಲಬುರಗಿ ಮತ್ತು ಮೈಸೂರುನಲ್ಲಿವೆ. ಬೆಂಗಳೂರಿನ ಮಲ್ಲೇಶ್ವರಂನ ಮುಖ್ಯ ಕಛೇರಿಯಲ್ಲಿಯೇ ಬೆಂಗಳೂರು ವಿಭಾಗದ ಕಛೇರಿಯೂ ಇದೆ.

   

   ಪ್ರತಿ ವರ್ಷ ಮಾರ್ಚಿ/ಏಪ್ರಿಲ್ ತಿಂಗಳಿನಲ್ಲಿ ಮಂಡಲಿಯ ವತಿಯಿಂದ ಜರುಗುವ 10ನೇ ತರಗತಿಯ (ಎಸ್.ಎಸ್.ಎಲ್.ಸಿ.) ಪರೀಕ್ಷೆಗಳಿಗೆ ಸುಮಾರು 8.5 ಲಕ್ಷ ಮಕ್ಕಳು ಹಾಜರಾಗುತ್ತಾರೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಮಂಡಲಿಯು ಪುನಃ ಜೂನ್ ತಿಂಗಳಿನಲ್ಲಿ ಪೂರಕ ಪರೀಕ್ಷೆಯನ್ನು ನಡೆಸುತ್ತದೆ. ಈ ಪೂರಕ ಪರೀಕ್ಷೆಗೆ ಸುಮಾರು 2.2 ಲಕ್ಷ ಮಕ್ಕಳು ಹಾಜರಾಗುತ್ತಿದ್ದಾರೆ. 12ನೇ ತರಗತಿಗೂ ಸಹ ಇದೇ ರೀತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

   

   ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ. 10ನೇ ಮತ್ತು 12ನೇ ತರಗತಿಯ ಪರೀಕ್ಷಾ ವಿಭಾಗಗಳಿಗೆ ಪ್ರತ್ಯೇಕ ನಿರ್ದೇಶನಾಲಯಗಳಿವೆ. ಈ ಎಲ್ಲಾ ಪರೀಕ್ಷೆಗಳ ವಿಷಯಗಳು ಮತ್ತು ವಿಧಾನಗಳ ವಿವರಗಳನ್ನು https://sslc.karnataka.gov.in ಜಾಲತಾಣದಲ್ಲಿ ನೀಡಲಾಗಿದೆ.

   

   ಮಂಡಳಿಯಲ್ಲಿ ಆಡಳಿತ ವಿಭಾಗ, ಲೆಕ್ಕಪತ್ರ ಶಾಖೆ, ಟೆಂಡರ್ ಗಳ ನಿರ್ವಹಣೆ, ಮೌಲ್ಯಮಾಪನ ಹಾಗೂ ಅಭ್ಯರ್ಥಿಗಳ ಪರೀಕ್ಷಾ ಅರ್ಜಿಗಳನ್ನು ಪರಿಶೀಲಿಸುವ ಪರಿಶೀಲನಾ ಶಾಖೆಗಳಿವೆ. 35 ಶೈಕ್ಷಣಿಕ ಜಿಲ್ಲೆಗಳ ಎಸ್.ಎಸ್.ಎಲ್.ಸಿ. ಪರೀಕ್ಷಾ ಅರ್ಜಿಗಳನ್ನು ಪರಿಶೀಲಿಸುವ 09 ಪರಿಶೀಲನಾ ಶಾಖೆಗಳಿವೆ. ಗಣಕ ಶಾಖೆಯು ಮಂಡಳಿಯ ಎಲ್ಲಾ ವಿಭಾಗಗಳಿಗೂ ಸಾಮಾನ್ಯವಾಗಿದೆ.

  

   2017-18 ನೇ ಸಾಲಿನಿಂದ ಮಂಡಳಿಯ ಪರೀಕ್ಷೆಗಳಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಡಿಜಿಟಲೀಕರಿಸಲಾಗುತ್ತಿದೆ. ಪರೀಕ್ಷೆಗಳಿಗೆ ನೋಂದಣಿ, ಪ್ರವೇಶ ಪತ್ರಗಳ ವಿತರಣೆ ಮತ್ತು ಫಲಿತಾಂಶ ಪ್ರಕಟಣೆಯನ್ನು ಆನ್ ಲೈನ್ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಮೌಲ್ಯಮಾಪನ ಕೇಂದ್ರಗಳಿಂದ ಅಂಕಗಳನ್ನು ಒ.ಎಂ.ಆರ್.ಗಳನ್ನು ಬಳಸಿ ಪಡೆಯುವುದನ್ನು ಕೈಬಿಡಲಾಗಿದ್ದು, ಅತ್ಯಾಧುನಿಕ ವಿಧಾನದಲ್ಲಿ ಅಂತರ್ಜಾಲದ ಮೂಲಕ ಮಂಡಳಿಗೆ ರವಾನಿಸಲಾಗುತ್ತಿದೆ. ಇದರಿಂದ ಫಲಿತಾಂಶ ಪ್ರಕಟಣೆಯನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಲು ಸಾಧ್ಯವಾಗಿರುವುದಲ್ಲದೆ, ಒ.ಎಂ.ಆರ್.ಗಳಲ್ಲಿ ಆಗುತ್ತಿದ್ದ ಶೇಡಿಂಗ್ ದೋಷಗಳನ್ನು ಸಹ ತಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್ ಸಂದೇಶದ ಮೂಲಕ ಮತ್ತು ವೆಬ್ ಪೋರ್ಟಲ್ ಮೂಲಕ ಫಲಿತಾಂಶಗಳನ್ನು ನೀಡಲಾಗುತ್ತಿದೆ. ಆನ್ ಲೈನ್ ನಲ್ಲಿ ವಲಸೆ ಪ್ರಮಾಣ ಪತ್ರ, ಅಂಕಪಟ್ಟಿಯ ನೈಜತೆ ಪರಿಶೀಲನೆ, ಹಿಂದಿನ ವರ್ಷಗಳ ಎರಡನೇ/ಮೂರನೇ/ನಾಲ್ಕನೇ /ಅನುತ್ತೀರ್ಣ ಅಂಕಪಟ್ಟಿ ನೀಡಿಕೆ, ಉತ್ತರ ಪತ್ರಿಕೆಗಳ ಛಾಯಾಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಮಾಪನ ಸೇವೆಗಳನ್ನು ಪ್ರಗತಿ-10 ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಡಿಜಿಲಾಕರ್ ಆಪ್ ಬಳಸಿ ಅಂಕಪಟ್ಟಿಗಳನ್ನು ಡೌನ್ ಲೋಡ್ ಮಾಡಿಕೊಳ್ಳವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.

 

   ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಮಂಡಲಿಯ ಮತ್ತೊಂದು ಪ್ರಮುಖ ವಿಭಾಗವಾಗಿದೆ. ಈ ವಿಭಾಗವು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ವಿಭಾಗಗಳ ಶಿಕ್ಷಣದ ಗುಣಮಟ್ಟವನ್ನು ವಾರ್ಷಿಕ ಸಮೀಕ್ಷಾ ಕಾರ್ಯಗಳನ್ನು ಮತ್ತು ಅವುಗಳಿಗೆ ಪರಿಹಾರಾತ್ಮಕ ಕ್ರಮಗಳನ್ನು ಸೂಚಿಸುವ ಕಾರ್ಯಗಳನ್ನು ನಿರ್ವಹಿಸುತ್ತಿದೆ.

 

   ಹೆಚ್ಚಿನ ವಿವರಗಳಿಗೆ ಹಾಗೂ ಸೇವೆಗಳಿಗಾಗಿ ಮಂಡಳಿಯ ಜಾಲತಾಣವನ್ನು ಅವಲೋಕಿಸಬಹುದಾಗಿದೆ. ನಮ್ಮನ್ನು ಸಂಪರ್ಕಿಸಿ ಮೆನು ಮೂಲಕ ತಮ್ಮ ಅಭಿಪ್ರಾಯಗಳನ್ನು ಸಂಬಂಧಿಸಿದ ಶಾಖೆಗಳಿಗೆ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.

ಇತ್ತೀಚಿನ ನವೀಕರಣ​ : 23-11-2022 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080